★★ ಜೈಪುರ್ – ರಾಜಸ್ಥಾನ್
# ಪಿಂಕ್ ಸಿಟಿ ಎಂದೇ ಖ್ಯಾತಿಯಾಗಿರುವ ಜೈಪುರವನ್ನು ಯುನೆಸ್ಕೋ ವಿಶ್ವ ಪರಂಪರೆಯ ನಗರ ಎಂದು ಯುನೆಸ್ಕೋ 2019 ರಲ್ಲಿ ತನ್ನ 43 ನೇ ಅಧಿವೇಶನದಲ್ಲಿ ಘೋಷಿಸಿದೆ.
* ಇದು ಭಾರತದ 38ನೇ ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿದೆ.
# ರಾಜಸ್ಥಾನದ ರಾಜಧಾನಿಯಾದ ಜೈಪುರವನ್ನು 1727 ರಲ್ಲಿ ಸವಾಯಿ ಜೈ ಸಿಂಗ್ II ಸ್ಥಾಪಿಸಿದರು ಮತ್ತು ಇದು ಚಿನ್ನದ ತ್ರಿಕೋನದ ಭಾಗವಾಗಿರುವ ಪ್ರಮುಖ ಪ್ರವಾಸಿ ತಾಣವಾಗಿದೆ – ಇದು ದೆಹಲಿ, ಆಗ್ರಾ ಮತ್ತು ಜೈಪುರವನ್ನು ಸಂಪರ್ಕಿಸುವ ಪ್ರವಾಸಿ ಸರ್ಕ್ಯೂಟ್ ಆಗಿದೆ.