ಈ ಲೇಖನದಲ್ಲಿ ಮಹಿಳೆಯರಿಗಾಗಿ ಕರ್ನಾಟಕ ಸರ್ಕಾರದ ಶಕ್ತಿ ಸ್ಮಾರ್ಟ್ ಕಾರ್ಡ್ (Shakti Smart Card) ಗೆ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ. ಅದರ ಸಂಪೂರ್ಣವಾದ ವಿವರ ಮತ್ತು ಕರ್ನಾಟಕ ರಾಜ್ಯದ ಮಹಿಳೆಯರು ಕೇಳಿದ ಪ್ರಶ್ನೆಗಳಿಗೆ ವಿವರಗಳು ಇಲ್ಲಿವೆ:
ಶಕ್ತಿ ಸ್ಮಾರ್ಟ್ ಕಾರ್ಡ್: ಪ್ರಮುಖ ಮಾಹಿತಿಗಳು:
ಪ್ರಸ್ತುತ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತೋರಿಸುತ್ತಿದ್ದಾರೆ. ಆದರೆ ಮುಂದೆ ಸರ್ಕಾರವು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಿದೆ. ಈ ಕಾರ್ಡ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿದೆ:
ಪ್ರಸ್ತುತ ಸ್ಥಿತಿ: ಸರ್ಕಾರವು ಈಗಷ್ಟೇ ಲಿಂಕ್ ಅನ್ನು ಬಿಡುಗಡೆ ಮಾಡಿದೆ, ಆದರೆ ನೋಂದಣಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕ ಸರ್ಕಾರದ ಶಕ್ತಿ ಸ್ಮಾರ್ಟ್ ಕಾರ್ಡ್ (Shakti Smart Card) ಗೆ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಹೇಗೆ?
ಹಂತ -1: ಅಧಿಕೃತ ವೆಬ್‌ಸೈಟ್: ಸೇವಾ ಸಿಂಧು ಗ್ಯಾರಂಟಿ ಸ್ಕೀಮ್ಸ್ (Seva Sindhu Guarantee Schemes) ಪೋರ್ಟಲ್‌ಗೆ ಭೇಟಿ ನೀಡಬೇಕು
ಹಂತ -2: ಅರ್ಜಿ ಸಲ್ಲಿಸುವ ವಿಧಾನ: ವೆಬ್‌ಸೈಟ್‌ನಲ್ಲಿ ‘ಶಕ್ತಿ ಯೋಜನೆ’ (Shakti Scheme) ಆಯ್ಕೆಯನ್ನು ಆರಿಸಿ. ಅಲ್ಲಿ “ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಎಂಬ ಲಿಂಕ್ ಇರುತ್ತದೆ
ಹಂತ -3: ಈ ಯೋಜನೆಯು ಪ್ರಮುಖವಾಗಿ ಮಹಿಳೆಯರಿಗೆ ಮತ್ತು ಲಿಂಗಾಯತ ಅಲ್ಪಸಂಖ್ಯಾತರಿಗೆ (Transgender) ಮಾತ್ರ ಸೀಮಿತವಾಗಿದೆ. ಪುರುಷರಿಗೆ ಈ ಸ್ಮಾರ್ಟ್ ಕಾರ್ಡ್ ಅಡಿಯಲ್ಲಿ ಉಚಿತ ಪ್ರಯಾಣದ ಸೌಲಭ್ಯ ಇರುವುದಿಲ್ಲ .

Important links to apply online
| Shakti smart card Yojana | Apply Online |
| Karnataka Jobs | Apply Online |
| Shrivardhan Tech Government Schemes | Click here |
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
- ಶಕ್ತಿ ಸ್ಮಾರ್ಟ್ ಕಾರ್ಡ್ ಎಂದರೇನು?
ಇದು ಕರ್ನಾಟಕ ರಾಜ್ಯದ ಸರ್ಕಾರಿ ಬಸ್ಗಳಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ನೀಡುವ ಒಂದು ಗುರುತಿನ ಚೀಟಿ.
- ಅರ್ಜಿ ಸಲ್ಲಿಸಲು ಎಲ್ಲಿ ಹೋಗಬೇಕು ಮತ್ತು ಯಾವ ವೆಬ್‌ಸೈಟ್ ಬಳಸಬೇಕು?
ಸರ್ಕಾರದ ಅಧಿಕೃತ ವೆಬ್ಸೈಟ್ ಅಂದರೆ ಸೇವಾ ಸಿಂಧು (Seva Sindhu) ಗೆ ಭೇಟಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸಲು ಶುಲ್ಕ ವಿದೆಯೇ?
ಇಲ್ಲ, ಇದು ಕರ್ನಾಟಕ ರಾಜ್ಯದ ಮಹಿಳೆಯರಿಗಾಗಿ ಬಿಡುಗಡೆಗೊಂಡಿರುವಂತ ಉಚಿತ ಯೋಜನೆ.
- ಸ್ಮಾರ್ಟ್ ಕಾರ್ಡ್ ಇಲ್ಲದೆ ಪ್ರಯಾಣಿಸಬಹುದೇ? ಈಗ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸಬಹುದು, ಆದರೆ ಮುಂದೆ ಬರುವ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
- ರಾಜ್ಯದ ಎಲ್ಲಾ ಪುರುಷರು ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಈ ಯೋಜನೆಯು ಕರ್ನಾಟಕ ರಾಜ್ಯದ ಮಹಿಳೆಯರಿಗಾಗಿ ಮಾತ್ರ.






